September 26, 2020

ಪ್ರತಿಕ್ರಿಯೆ/React (Harsh FB Post) Vs ಸ್ಪಂದನೆ/Respond (This Blog)

--------------------------------------------------------------------------------------------------------------------------
ಪ್ರತಿಕ್ರಿಯೆ/React (Harsh FB Post) Vs ಸ್ಪಂದನೆ/Respond (This Blog)
--------------------------------------------------------------------------------------------------------------------------
ನನಗೆ ಬಂದ ಸಿಟ್ಟಿಗೂ facebook ಅಥವಾ instagramಗೂ connection ಇದ್ದಿದ್ದರೆ ಅತ್ಯುಗ್ರವಾದ post ಅಲ್ಲಿರುತ್ತಿತ್ತು. ಆದರೆ ತಾಳ್ಮೆ ಗೆದ್ದಿತ್ತು ಮತ್ತು ಈ blogಗೆ ಕಾರಣವಾಯ್ತು.

ಮೂವತ್ತು ನಿಮಿಷಗಳ ಸೈಕಲ್ ತುಳಿತ, ಮನಸ್ಸಿನ ಆವೇಗಗಳ ಗುದ್ದಾಟಗಳ ನಡುವೆ ಮೂಡಿತು ಈ ಕಾಲ್ಪನಿಕ ಕಥೆ.

ಒಬ್ಬ ಇಪ್ಪತ್ತರ ತರುಣ ತನ್ನನ್ನು ತಾನು ಹಿಂದೆಂದೂ ಕಾಣದ ಜಾಗದಲ್ಲಿ ಕಂಡು ಆಶ್ಚರ್ಯಚಕಿತನಾದ. ಅವನೆದುರಿರುವ ಗೇಟ್ ತೆಗೆದು ಒಳಗೆ ಪ್ರವೇಶಿಸಿದಾಗ ಕಂಡ ಮೊದಲ ವ್ಯಕ್ತಿಯ ಕೇಳಿದ 'ಇದು ಯಾವ ಜಾಗ?'

ಚಿತ್ರಗುಪ್ತ ಉತ್ತರಿಸಿದ 'ಇದು ದೇವಲೋಕ'

ಕೋಪದಿಂದ ಕುದಿಯುತ್ತಾ 'ಇಲ್ಲಿಗೆ ಹೇಗೆ ಬಂದೆ? ಅಪ್ಪ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ 'ಧೈರ್ಯದಿಂದಿರು ನೀನಗೇನೂ ಆಗುವುದಿಲ್ಲ' ಎನ್ನುತ್ತಿದ್ದರು. ನಾನು ಆಸ್ಪತ್ರೆ ಬಿಟ್ಟು ಇಲ್ಲಿ ಹೇಗೆ?'

'ಮಗು, ನೀನು ಆಸ್ಪತ್ರೆ ತಲುಪಿದೆ. ಅಲ್ಲಿನ ಡಾಕ್ಟರುಗಳು ಅವರ ಎಲ್ಲ ಶಕ್ತಿಯನ್ನು ಉಪಯೋಗಿಸಿದರು. ಆದರೂ ಸಫಲರಾಗಲಿಲ್ಲ. ನಿನ್ನ ಅಪ್ಪನಿಗೆ ಹೇಳಿದರು 'ಅರ್ಧ ಘಂಟೆ ಮುಂಚೆ ತಲುಪಿದ್ದರೆ ಬದುಕುತ್ತಿದ್ದ'

'ಆಸ್ಪತ್ರೆ ಮನೆಯಿಂದ ಬಹಳ ದೂರವಿರಲಿಲ್ಲ. ಆಂಬುಲೆನ್ಸ್ ಕೂಡ ತಕ್ಷಣ ಬಂದಿತ್ತು. ಆದರೂ ಹೀಗೇಕೆ?'

'ನಿನಗೆ ನೆನಪಿಲ್ಲವೇ ಮಗು. ಆಗ ಬೆಳಗಿನ peak hour ಟ್ರಾಫಿಕ್. ಎಲ್ಲಾ ವಾಹನ ಸವಾರರಿಗೂ ಮೊದಲು ಕೆಲಸಕ್ಕೆ ತಲುಪುವ ಆಲೋಚನೆ. ಕೆಲವು ಲಗೇಜ್ ಆಟೋಗಳಿಗೂ, ನೀರಿನ ಟ್ಯಾಂಕರ್ ಗಳಿಗೂ ತಮ್ಮ ಕೆಲಸ ಬೇಗ ಮುಗಿಸುವ ಕಾತರ. ಹೀಗೆ ರಸ್ತೆ ತುಂಬಾ ತಾವು ಸರಿ ಸಮಯಕ್ಕೆ ತಲುಪುವುದು ಆಂಬುಲೆನ್ಸ್ ಗೆ ದಾರಿ ಕೊಡುವುದಕ್ಕಿಂತ ಮುಖ್ಯ ಎಂದು ತಿಳಿದವರೇ . ಅವರಿಗೆ ಒಳಗಿರುವ ನಿನ್ನ ಪರಿಸ್ಥಿತಿ ತಿಳಿದಿದ್ದರೆ ಹಾಗೆ ಮಾಡುತ್ತಿರಲಿಲ್ಲವೋ ಏನೋ .

'ಇಲ್ಲಾ.... ಅದು ಬಹಳ basic civic sense (ನಾಗರೀಕ ಪ್ರಜ್ಞೆ) . ನನ್ನ ತಂದೆ ಯಾವಾಗಲೂ ನನಗೆ ಹೇಳಿಕೊಡುತ್ತಿದ್ದರು. ನಾನು ಯಾವಾಗಲೂ ಪಾಲಿಸುತ್ತಿದ್ದೆ ಮತ್ತು ಉಳಿದವರಿಗೂ ಪಾಲಿಸಲು ಆಗ್ರಹಿಸುತ್ತಿದ್ದೆ. ನಾನಿಲ್ಲಿರುವುದಕ್ಕೆ ಅವರೇ ಕಾರಣ. ನನಗೆ ಅವರ ಬಗ್ಗೆ ಮಾಹಿತಿ ಬೇಕು. ಸಿಗಬಹುದೇ?'

ಸ್ವಲ್ಪ ಪ್ರಯತ್ನದ ನಂತರ ಚಿತ್ರಗುಪ್ತ ಅವನಿಗೆ ಒಂದು ಪಟ್ಟಿ ಇತ್ತ . ಅದರಲ್ಲಿ ಪ್ರತಿ ವಿವರ ವಿಡಿಯೋ ಕ್ಲಿಪ್ ಸಮೇತ ಇತ್ತು. 'ಇದರಿಂದ ನೀನೇನು ಮಾಡುವೆ?'

'Ditto' ಎಂದ ಆ ಹುಡುಗ

ನಮಗೆ ತಿಳಿದಿರುವಂತೆ ಮರಣ ನಂತರ ಪಡೆದ ಹೇರಳವಾದ ಶಕ್ತಿ, ಚಿತ್ರಗುಪ್ತ ಮತ್ತು ಯಮರ ಸಹಕಾರದಿಂದ ಕೆಳಗಿನದು ಬಹಳ ಬೇಗ ನಡೆಯಿತು.

ಆ ನಗರದ ಸ್ಮಶಾನಗಳು ಬಿಡುವಿಲ್ಲದೆ ದಿನಪೂರ್ತಿ ಕೆಲಸ ಮಾಡಿದರೂ ಮರುದಿನಕ್ಕೆ ಮಿಗುವಂತೆ ಕೆಲಸವಿರುತ್ತಿತ್ತು. ಎಲ್ಲ ರಸ್ತೆಗಳಲ್ಲೂ ಹೆಚ್ಚಿನ ವಾಹನ ಮತ್ತು ಜನರಿಲ್ಲದೆ ಎಲ್ಲರ ಪ್ರಯಾಣ ಸರಾಗವಾಗಿತ್ತು. ನಾಗರಿಕರಿಗೆ ಇದರಿಂದ ಉಳಿದ ಸಮಯವನ್ನು ಹೇಗೆ ಕಳೆಯಬೇಕೆಂದು ತಿಳಿಯದೆ ಬೇಜಾರಿನಲ್ಲಿದ್ದರು.

ಅದೇ ಸಮಯದಲ್ಲಿ ದೇವಲೋಕದಲ್ಲಿ ಆ ಹುಡುಗನಿಗೆ ಇನ್ನಿಲ್ಲದ ಆದರ ಮತ್ತು ಅಭಿಮಾನ ದೊರೆಯಿತು. 'Ditto' ಜನರು ತಮ್ಮ ತಪ್ಪಿಗಾಗಿ ಪರಿತಪಿಸಿದರು. ಹಾಗೆಯೇ ಮುಂದಿನ ಜನುಮದಲ್ಲಿ ಹೀಗಾಗದಿರುವಂತೆ ನೋಡಿಕೊಳ್ಳುತ್ತೇವೆಂದು ಪ್ರಮಾಣಿಸಿದರು.

--ಶುಭಾರಂಭ ---

No comments: